ಮಾದಕ ವ್ಯಾಸನ ವಿರುದ್ಧ ಜಾಗೃತಿ ಮಾಹಿತಿ ಕಾರ್ಯಗಾರ, ನ್ಯೂ ವೈಬ್ರಂಟ್ ಪಿಯು ಕಾಲೇಜು, ಮೂಡಬಿದ್ರೆ

ಮಾದಕ ವಸ್ತುಗಳು ಮಾನಸಿಕ ಹಾಗೂ ಶಾರೀರಿಕ ಆರೋಗ್ಯವನ್ನು ಹಾಳು ಮಾಡುತ್ತದೆ ಎಂದು ಮೂಡುಬಿದಿರೆ ಪೊಲೀಸ್ ಸ್ಟೇಷನ್ ನ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಪ್ರತಿಭಾ ಮಾತನಾಡಿದರು.                  

 ನ್ಯೂ ವೈಬ್ರೆಂಟ್ ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಮಾದಕ ವ್ಯಾಸನ ವಿರುದ್ಧ ಜಾಗೃತಿ ‘ಎಂಬುದರ ಕುರಿತು ಮಾಹಿತಿ ಕಾರ್ಯಗಾರದಲ್ಲಿ ವಿದ್ಯಾರ್ಥಿನಿಯರನ್ನು  ಉದ್ದೇಶಿಸಿ  ಮಾತನಾಡಿದರು.

ಅವರು ಇತ್ತೀಚಿನ ಯುಗದಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯ ಕುರಿತು ಎಚ್ಚರ ವಹಿಸಬೇಕು. ಮತ್ತು  ವಿದ್ಯಾರ್ಥಿಗಳು ಮಾದಕ ದ್ರವ್ಯಗಳಿಗೆ  ಒಳಗಾದಾಗ ಅದನ್ನು ಪ್ರಾಥಮಿಕ ಹಂತದಲ್ಲಿಯೇ ನಿವಾರಣೆ ಮಾಡುವ ಕುರಿತು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.

ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ವಿದ್ಯಾರ್ಥಿಗಳು ಆರೋಗ್ಯವಾಗಿರುವುದಿಲ್ಲ  ಅವರು ವಿದ್ಯಾಭ್ಯಾಸದ ಕಡೆಗೆ ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ.  ಹಾಗಾಗಿ ಸುತ್ತು ಮುತ್ತಲಿನ ಜನರ ಜೊತೆ ಬೆರೆಯುವಾಗ    ಜಾರುಕತೆಯಿಂದ  ಇರಬೇಕು ಎಂದು ಮಂಗಳೂರು ರೋಷ್ನಿ  ನಿಲಯದ  ಸಮಾಜ ಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ರಮ್ಯ ಮಾತನಾಡಿದರು .                                                   

ಕಾಲೇಜಿನ ಟ್ರಸ್ಟಿ ಹಾಗೂ ಪ್ರಾಂಶುಪಾಲ ಡಾ ಎಸ್ ಎನ್ ವೆಂಕಟೇಶ್ ನಾಯಕ್ ಮಾತನಾಡಿದರು .           

ಈ ಕಾರ್ಯಕ್ರಮದಲ್ಲಿ  ವೈಬ್ರೆಂಟ್  ಎಜುಕೇಶನಲ್ ಚಾರಿಟೇಬಲ್  ಟ್ರಸ್ಟ್ ನ ಟ್ರಸ್ಟಿಗಳಾದ  ಮೆಹಬೂಬ್ ಬಾಷಾ, ಚಂದ್ರಶೇಖರ್ ರಾಜೇ  ಅರಸ್,ಯೋಗಿಶ್  ಬೆಡೆಕರ್, ಸುಭಾಶ್  ಝಾ, ಶರತ್ ಗೋರೆ ಮತ್ತು  ಕಾಲೇಜಿನ ಆಡಳಿತಾಧಿಕಾರಿ ಅರುಣ್ ಡಿಸಿಲ್ವಾ ಉಪಸ್ಥಿತರಿದ್ದರು .  

ಕಾರ್ಯಕ್ರಮವನ್ನು ಕನಿಷ್ಕ ಪ್ರಕಾಶ್ ಮತ್ತು ಶ್ರೇಯಸ್ ಶಾನುಭೋಗ್  ನಿರೂಪಿಸಿದರು.  ಆ್ಯಂಟಿ  ಡ್ರಗ್ ಸೆಲ್  ನ  ಸಂಯೋಜಕರಾದ ಅರುಣ್ ಕುಮಾರ್ ಎಚ್ ಸ್ವಾಗತಿಸಿ, ಕನ್ನಡ ವಿಭಾಗದ ಉಪನ್ಯಾಸಕರಾದ ಅಜಿತ್ ರೈ ವಂದಿಸಿದರು

Leave a Reply

Your email address will not be published. Required fields are marked *